¡Sorpréndeme!

ಬೆಂಗಳೂರು ಹವಾಮಾನ : ಫೆಬ್ರವರಿವರೆಗೂ ಇರತ್ತೆ ಮೈ ನಡುಗಿಸುವ ಚಳಿ | Oneindia Kannada

2017-12-20 312 Dailymotion

'ಅಯ್ಯೋ ಚಳಿ ಚಳಿ' ಎಂದು ಎರಡೂ ಕೈಗಳನ್ನು ಉಜ್ಜುತ್ತಾ, ಬೇಗ ಹೋಗ್ಬೇಕಲ್ಲ ಅಂತ ಆಫೀಸಿಗೆ ಶಪಿಸುತ್ತ... ಬೆಳ್ಗೆ ಕಷ್ಟಪಟ್ಟು ಏಳೋ ಪಾಡು ಸದ್ಯಕ್ಕೆ ಬೆಂಗಳೂರಿಗರದ್ದು! ಉದ್ಯಾನ ನಗರಿಯಲ್ಲಿ ನವೆಂಬರ್ ಮುಗಿಯುತ್ತಾ ಬಂದರೂ ಚಳಿ ಇಲ್ಲವಲ್ಲ ಎಂದು ದೂರಿದ್ದವರಿಗೆಲ್ಲ, ಯಾಕಾದರೂ ದೂರಿದೆವೋ ಎಂಬಂತಾಗಿರೋದು ಸುಳ್ಳಲ್ಲ! ಬೆಂಗಳೂರಿಗರಿನಲ್ಲೀಗ ಥಂಡಾ ಥಂಡಾ ಕೂಲ್ ಕೂಲ್ ವಾತಾವರಣ. ಮೈನಡುಗುವ ಚಳಿಗೆ ಮುದುರಿ ಮಲಗಿರುವವರೆಲ್ಲ, ಪ್ರತಿ ದಿನವೂ ಸಂಡೆಯಾಗಬಾರದಿತ್ತಾ ಎಂದು ಹಲುಬುವ ಸಮಯ! ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಡಿ.19 ರಂದು ಮಂಗಳವಾರ ಬೆಂಗಳೂರು ಹೊರವಲಯದಲ್ಲಿ ತಾಪಮಾನ ಕನಿಷ್ಠ 13 ಡಿಗ್ರಿ ಸೆಲ್ಷಿಯಸ್ ವರೆಗೂ ತಲುಪಿತ್ತು! ಬೆಂಗಳೂರು ನಗರದಲ್ಲಿ ಬೆಳಿಗ್ಗೆ 5.30 ರ ಸುಮಾರಿಗೆ 15 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿತ್ತು. ಬೆಳ್ಳಂಬೆಳಗ್ಗೆ ಬೀಸುವ ತಣ್ಣನೆ ಗಾಳಿಯಂತೂ ಮತ್ತಷ್ಟು ಭಯಂಕರವಾಗಿದ್ದು ಮೈ ನಡಿಗಿಸುತ್ತಿದೆ.

According to Indian Meteorological Department (IMD) data, on Dec 19th, Bengaluru saw a minimum temperature of 15 degree Celsius. And IMD officials said, the chill weather will be continued till February.